Fact Check :ಈ ಫೋಟೋ ಇಸ್ರೇಲ್‌ನ ಸೇನೆಗೆ ಸಂಬಂಧಿಸಿದ್ದು ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧ ಆರಂಭವಾಗುತ್ತಿದ್ದಂತೆ ಈ ಯುದ್ಧಕ್ಕೆ ಸಂಬಂಧ ಪಟ್ಟಂತೆ ಹಲವು ರೀತಿಯ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬೋದಕ್ಕೆ ಪ್ರಾರಂಭವಾಗಿದೆ. ಅದರಲ್ಲೂ ಕೆಲವೊಂದು ಸುದ್ದಿಗಳಿಗೆ ಹಳೆಯ ಫೋಟೋಗಳನ್ನು ಬಳಸಿಕೊಂಡು ಅದು ಇತ್ತೀಚಿನ ಹಮಾಸ್‌ ಮತ್ತು ಇಸ್ರೇಲ್‌ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿದ ಫೋಟೋವಾಗಿದೆ ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಯೋಧೆಯೊಬ್ಬಳು ಸೈನಿಕರ ರೀತಿ ಬಟ್ಟೆ ಧರಿಸಿ ಒಂದು ಕೈಯಲ್ಲಿ ಗನ್‌ ಮತ್ತೊಂದು ಕೈಯಲ್ಲಿ ಮಗುವನ್ನು ಹಿಡಿದುಕೊಂಡಿರುವ ಫೋಟೋ ಸಾಮಾಜಿಕ…

Read More
ಕಾಂಗ್ರೆಸ್

ನಿಮ್ಮ ಮಕ್ಕಳ ಕಲ್ಯಾಣವಾಗಬೇಕಾದರೆ ಕಾಂಗ್ರೆಸ್‌ಗೆ ಮತ ನೀಡಿ ಎಂದು ಪ್ರಧಾನಿ ಮೋದಿ ಹೇಳಿಲ್ಲ

“ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯ ಕಲ್ಯಾಣವಾಗಬೇಕಾದರೆ ಕಾಂಗ್ರೆಸ್‌ಗೆ ಮತ ನೀಡಿ” ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ ಎನ್ನುವ ವಿಡಿಯೋ ಒಂದನ್ನು मोदी जी का जनता से अपील ಎಂಬ ಸಂದೇಶದೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ಚೆಕ್: ಈ ವೈರಲ್ ವಿಡಿಯೋ 27, ಜೂನ್ 2023ರಂದು ಮಧ್ಯಪ್ರದೇಶದ ಭುಪಾಲ್‌ನಲ್ಲಿ ನಡೆದ “ಮೆರಾ ಬೂತ್ ಸಬ್ಸೆ ಮಜಬೂತ್” ಕಾರ್ಯಕ್ರಮದ್ದಾಗಿದೆ. ಭಾಷಣದಲ್ಲಿ ಮೋದಿಯವರು “ನಿಮ್ಮ ಹಾಗೂ ನಿಮ್ಮ ಮಕ್ಕಳ ಭವಿಷ್ಯ ಕಲ್ಯಾಣವಾಗಬೇಕಾದರೆ ಬಿಜೆಪಿಗೆ ಮತ ನೀಡಿ. ನೆಹರೂ…

Read More
AI

Fact Check: AI ಸೃಷ್ಟಿಸಿದ ಚಿತ್ರಗಳನ್ನೇ ಕಾಶಿ, ಅಯೋಧ್ಯೆಯ ರೈಲ್ವೆ ನಿಲ್ದಾಣದ ನೀಲನಕ್ಷೆ ಎಂದು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಕೃತಕ ಬುದ್ದಿಮತ್ತೆ(AI)ಯಿಂದ ಸೃಷ್ಟಿಸಿದ ಪೋಟೋಗಳನ್ನು ಮತ್ತು ವಿಡಿಯೋಗಳನ್ನು ನಿಜವೆಂದು ನಂಬಿ ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ “ಇದು ಕಾಶಿ, ವಾರಣಾಸಿ ಅಥವಾ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮೆಟ್ರೋ, ರೈಲ್ವೆ ಸ್ಟೇಷನ್ ನೀಲನಕ್ಷೆ” ಎಂದು ಪ್ರತಿಪಾದಿಸಿದ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್‌: ಇದು ಕೃತಕ ಬುದ್ಧಿಮತ್ತೆ(AI)ಯಿಂದ ಸೃಷ್ಟಿಸಿದ ಚಿತ್ರವಾಗಿದೆ. ಅಮರ್ ಎಂಬ ಇಂಜಿನಿಯರ್ ಒಬ್ಬ ಹಲವಾರು ರೈಲ್ವೆ ನಿಲ್ದಾಣಗಳ ಚಿತ್ರಗಳನ್ನು ಸೃಷ್ಟಿಸಿದ್ದು, ತನ್ನ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈತ ಅಯೋಧ್ಯೆಯ ರೈಲ್ವೇ ನಿಲ್ದಾಣದ ಚಿತ್ರವನ್ನೂ ಸಹ AI…

Read More
ಟಿಪ್ಪು ಸುಲ್ತಾನ

ಟಿಪ್ಪು ಸುಲ್ತಾನನ ನಿಜ ಚಿತ್ರವೆಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿರುವ ಪೋಟೋಗಳು ಅರಬ್ ಮತ್ತು ಆಫ್ರಿಕಾದ ವ್ಯಾಪಾರಿಗಳದ್ದು

ಕಳೆದೊಂದು ದಶಕದಲ್ಲಿ “ಮೈಸೂರ ಹುಲಿ” ಎಂದೇ ಖ್ಯಾತನಾದ ಟಿಪ್ಪು ಸುಲ್ತಾನ್ ಕುರಿತು, ಆತನ ಇತಿಹಾಸದ ಕುರಿತು ಸಾಕಷ್ಟು ರಾಜಕೀಯ ಪ್ರೇರಿತ ಚರ್ಚೆಗಳು, ವಾದ-ವಿವಾದಗಳು ನಡೆಯುತ್ತಿವೆ. ನೈಜ ಇತಿಹಾಸವನ್ನು ಕೆದಕುವ ಭರದಲ್ಲಿ ಸುಳ್ಳುಗಳನ್ನು, ಕಟ್ಟು ಕಥೆಗಳನ್ನೂ ಬಳಸಿಕೊಂಡು ಟಿಪ್ಪು ಸುಲ್ತಾನನ ಇತಿಹಾಸದ ಮೇಲೆ ಸಾಕಷ್ಟು ದಾಳಿ ನಡೆಸಲಾಗುತ್ತಿದೆ. ಇಂತಹ ತೇಜೋವಧೆಯ ಭಾಗವಾಗಿ ಹಲವಾರು ವರ್ಷಗಳಿಂದ “ಇದು ನಿಜವಾದ ಟಿಪ್ಪು ಸುಲ್ತಾನನ ಚಿತ್ರ. ಕಾಂಗ್ರೆಸ್ ಸುಳ್ಳು ಚಿತ್ರವನ್ನು ಭಾರತದ ಶಾಲಾ ಪಠ್ಯಪುಸ್ತಕದಲ್ಲಿ ಮಕ್ಕಳಿಗೆ ತೋರಿಸುತ್ತಾ ಬಂದಿದೆ.” ಎಂದು ಪ್ರತಿಪಾದಿಸಿದ ಹಲವಾರು…

Read More
ಬುರ್ಖಾ

ಬುರ್ಖಾ ಧರಿಸದ ಹಿಂದೂ ಮಹಿಳೆಯರು ಕೇರಳದ ಬಸ್‌ ಹತ್ತುವಂತಿಲ್ಲ ಎಂಬುದು ಸುಳ್ಳು

“ಕೇರಳದಲ್ಲಿ ಮುಸ್ಲಿಂ ಮಹಿಳಾ ಪ್ರಯಾಣಿಕರು ಬುರ್ಖಾ ಇಲ್ಲದೆ ಮಹಿಳೆಯರನ್ನು ಬಸ್‌ನಲ್ಲಿ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಈಗ, ಹಿಂದೂಗಳು ತಮ್ಮ ತಲೆಯನ್ನು ಮುಚ್ಚಿಕೊಳ್ಳಬೇಕು ಮತ್ತು ನಂತರ ಮಾತ್ರ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಬಹುದು. ಆಶ್ಚರ್ಯಕರವಾಗಿ, ಈ ಘಟನೆಯನ್ನು ಯಾವುದೇ ಟಿವಿ ಚಾನೆಲ್ ಮತ್ತು ಯಾವುದೇ ಪತ್ರಿಕೆಯು ವರದಿ ಮಾಡಿಲ್ಲ. ಮಾಧ್ಯಮಗಳು ನಿಗೂಢವಾಗಿ ಮೌನವಾಗಿವೆ” ಎಂದು ಬಸ್‌ನಲ್ಲಿ ಜಗಳ ನಡೆಯುವ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ನಿನ್ನೆ ಕೇರಳದಲ್ಲಿ. ಮುಸ್ಲಿಂ ಮಹಿಳಾ ಪ್ರಯಾಣಿಕರು ಬುರ್ಖಾ ಇಲ್ಲದೆ ಮಹಿಳೆಯರನ್ನು ಬಸ್‌ನಲ್ಲಿ ಅನುಮತಿಸುವುದಿಲ್ಲ ಎಂದು…

Read More

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮೋದಿ ಹೆಸರಿನಲ್ಲಿ ಓಟು ಕೇಳಿ ಎಂದು ಹೇಳಿಲ್ಲ

ಪಂಚರಾಜ್ಯಗಳ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಷ್ಟ್ರ ರಾಜಕಾರಣದಲ್ಲಿ ತ್ರೀವ್ರವಾದ ಸಂಚಲನ ಶುರುವಾಗಿದೆ. ರಾಷ್ಟ್ರೀಯ ಪಕ್ಷಗಳ ಆರೋಪ, ಪ್ರತ್ಯಾರೋಪಗಳ ನಡುವೆ ಕೆಲವು ಸುಳ್ಳು ಸುದ್ದಿಗಳು ಸಹ ಹರಿದಾಡುತ್ತಿವೆ. ಇತ್ತೀಚಿಗೆ ಇದೇ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್‌ರವರು ತಮ್ಮ ಪಕ್ಷದ ಆಂತರಿಕ ಸಭೆಯಲ್ಲಿ “ಬೆಲೆ ಏರಿಕೆಯಿಂದ, ನಿರುದ್ಯೋಗದಿಂದ ಮಧ್ಯಪ್ರದೇಶದ ಜನ ಬಿಜೆಪಿಯ ಕುರಿತು ಬೇಜಾರಾಗಿದ್ದಾರೆ. ಸರ್ವೆಗಳು ಸಹ ನಮ್ಮ ಪಾರ್ಟಿಯ ಸ್ಥಿತಿ ಚಿಂತಾಜನಕವಾಗಿವೆ ಎಂದು ಹೇಳುತ್ತಿವೆ. ಹಾಗಾಗಿ ನಾನು ಎಲ್ಲರಿಗೂ…

Read More

ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ರಾಮಮಂದಿರದ ವಿರುದ್ಧ ವಾದಿಸಲು 24 ಜನ ವಕೀಲರನ್ನು ನೇಮಿಸಿರಲಿಲ್ಲ

24 ಜನ ವಕೀಲರನ್ನು ನೇಮಿಸಿ, ಪ್ರಭು ಶ್ರೀರಾಮಚಂದ್ರನ ಅಸ್ತಿತ್ವಕ್ಕೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಅಫೆಡಿವಿಟ್ ಸಲ್ಲಿಸಿದ್ದ ಆಂಟೋನಿಯೋ ಮೈನೋ ಮತ್ತು ತಂಡದಿಂದ ಇಂದು ಅದೇ ಶ್ರೀರಾಮಚಂದ್ರನಿಗೆ ಪೂಜೆ. ಲೋಕಸಭಾ ಚುನಾವಣಾ ಗಿಮಿಕ್. ಎಂದು ಬರೆದ ವಿಡಿಯೋ ಒಂದು ಹಲವು ದಿನಗಳಿಂದ ಹರಿದಾಡುತ್ತಿದೆ. ಇಂತಹ ಪ್ರತಿಪಾದನೆಯ ಹಲವು ಪೋಸ್ಟರ್‌ಗಳು, ವಿಡಿಯೋಗಳು ಹೀಗಾಗಲೇ ಯೂಟೂಬ್ ಸೇರಿದಂತೆ, ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಫ್ಯಾಕ್ಟ್‌ಚೆಕ್: ಅಯೋಧ್ಯೆಯ ಬಾಬರಿ ಮಸೀದಿ ಕೆಡವಿದ ಜಾಗ ನಮಗೆ ಸೇರಬೇಕೆಂದು ನಿರ್ಮೋಹಿ ಅಖಾಡ,…

Read More
ತ್ರಿವರ್ಣ ಧ್ವಜ

ಡಿಎಂಕೆ ಸರ್ಕಾರ ಭಾರತೀಯ ತ್ರಿವರ್ಣ ಧ್ವಜವನ್ನು ಸ್ಟೇಡಿಯಂಗೆ ಕೊಂಡೊಯ್ಯದಂತೆ ತಡೆದಿದೆ ಎಂಬುದು ಸುಳ್ಳು

ಭಾರತದಲ್ಲಿಯೇ ಭಾರತದ ಧ್ವಜವನ್ನು ಅವಮಾನಿಸಲಾಗಿದೆ. ತಮಿಳುನಾಡು ಪೋಲಿಸರು ನಮ್ಮ ದೇಶದ ತ್ರಿವರ್ಣ ಧ್ವಜಕ್ಕೆ ಅವಮಾನ ಸಲ್ಲಿಸಿದ್ದಾರೆ. ಚಿದಂಬರಂ ಸ್ಟೇಡಿಯಂನಲ್ಲಿ (Chepauk ಸಚಿವ ಉದಯನಿಧಿ ಸ್ಟಾಲಿನ್ ಕ್ಷೇತ್ರ) ನಡೆದ ಪಾಕಿಸ್ತಾನದ ವಿರುದ್ದ ಆಫ್ಘಾನಿಸ್ತಾನ ವಿಶ್ವಕಪ್‌ ಪಂದ್ಯದ ವೇಳೆ ಭಾರತದ ತ್ರಿವರ್ಣ ಧ್ವಜವನ್ನು ಸ್ಟೇಡಿಯಂ ಒಳಗೆ ಕೊಂಡೋಯ್ಯದಂತೆ ತಮಿಳುನಾಡಿನ ಪೋಲಿಸರು ತಡೆದಿದ್ದಾರೆ.  ಭಾರತದ ಧ್ವಜವನ್ನು ಇಂಡಿಯಾ ಒಕ್ಕುಟದ ಡಿಎಂಕೆ ಪಕ್ಷ ನಿಷೇದಿಸಿದೆ. ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಮತ್ತು ಡಿಎಂಕೆ ಪಕ್ಷವನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ. ತಮಿಳುನಾಡಿನ ಬಿಜೆಪಿ ಮುಖ್ಯಸ್ಥ…

Read More
104

Blood On Call- 104 ಕ್ಕೆ ಕರೆ ಮಾಡಿದ 4 ಗಂಟೆಯಲ್ಲಿ ರಕ್ತ ಕೊಡುವ ಯೋಜನೆ ಅಸ್ತಿತ್ವದಲ್ಲಿಲ್ಲ

ಸರ್ಕಾರದ ಹೊಸ ಯೋಜನೆ….. “ಇಂದಿನಿಂದ “104” ಭಾರತದಲ್ಲಿ ರಕ್ತದ ಬೇಡಿಕೆಯ ವಿಶೇಷ ಸಂಖ್ಯೆಯಾಗಲಿದೆ”. “Blood_On_Call” ಎಂಬುದು ಸೇವೆಯ ಹೆಸರು. ಈ ಸಂಖ್ಯೆಗೆ ಕರೆ ಮಾಡಿದ ನಂತರ, 40 ಕಿಮೀ ವ್ಯಾಪ್ತಿಯೊಳಗೆ, ರಕ್ತವನ್ನು ನಾಲ್ಕು ಗಂಟೆಗಳ ಒಳಗೆ ತಲುಪಿಸಲಾಗುತ್ತದೆ.. ಪ್ರತಿ ಬಾಟಲಿಗೆ ರೂ. 450/- ಮತ್ತು ಸಾಗಣೆಗೆ ರೂ. 100/-. ದಯವಿಟ್ಟು ಈ ಸಂದೇಶವನ್ನು ನೀವು ಸಂಪರ್ಕದಲ್ಲಿರುವ ಇತರ ಸ್ನೇಹಿತರು, ಸಂಬಂಧಿಕರು ಮತ್ತು ಗುಂಪಿಗೆ ಫಾರ್ವರ್ಡ್ ಮಾಡಿ. ಈ ಸೌಲಭ್ಯದ ಮೂಲಕ ಅನೇಕ ಜೀವಗಳನ್ನು ಉಳಿಸಬಹುದು ಎಂಬ ಸಂದೇಶ…

Read More
ರಾಹುಲ್ ಗಾಂಧಿ

ಭಾರತೀಯ ಸೈನ್ಯದ ಬದಲು, ಕಾರ್ಮಿಕರು ಮತ್ತು ರೈತರ ಸೈನ್ಯ ಬೇಕೆಂದು ರಾಹುಲ್ ಗಾಂಧಿ ಪ್ರತಿಪಾದಿಸಿಲ್ಲ

ಭಾರತದ ಕಾರ್ಮಿಕರು, ರೈತರು ಮತ್ತು ನೌಕರರನ್ನು ಬಳಸಿಕೊಂಡರೆ ಚೀನಾದ ವಿರುದ್ದ ಹೋರಾಡಲು ಭಾರತೀಯ ಸೇನೆಯ ಅಗತ್ಯವೇ ಇರುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. “ಇಂತವನನ್ನು ಮುಂದಿನ ಪ್ರಧಾನಿ ಮಾಡಿದರೆ ದೇಶದ ಕತೆ ಏನಾಗಬಹುದು ಎಂದು ಚಿಂತಿಸಿ” ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಈ ವಿಡಿಯೋ 24 ಜನವರಿ, 2021ರಂದು ತಮಿಳುನಾಡಿನಲ್ಲಿ ನೇಕಾರ ಸಮುದಾಯದ ಜೊತೆಗೆ ರಾಹುಲ್ ಗಾಂಧಿ ನಡೆಸಿದ ಸಂವಾದವಾಗಿದೆ. “ಭಾರತದ ದುರ್ಬಲ ಆರ್ಥಿಕತೆಯಿಂದಾಗಿ ನಮ್ಮ ಗಡಿಗಳಲ್ಲಿ ಚೀನಾದ ಅತಿಕ್ರಮಣಗಳು ನಡೆಯುತ್ತಿದೆ ಎಂದು…

Read More