ಸೋನಿ ಲೈವ್ ಇಂಡಿಯನ್ ಐಡಲ್ ಶೋನ 14 ನೇ ಆವೃತ್ತಿಯಲ್ಲಿ ಅಂಬೇಡ್ಕರ್ ಹಾಡು ಎಂಬುದು ಎಡಿಟೆಡ್ ವಿಡಿಯೋ

ಸೂರ್ಯಕಾಂತ್ ಎಂಬ ಗಾಯಕನೊಬ್ಬ ಸೋನಿ ಲೈವ್ ನಡೆಸುವ ಇಂಡಿಯನ್ ಐಡಲ್ ಶೋನ 14 ನೇ ಆವೃತ್ತಿಯಲ್ಲಿ ಅಂಬೇಡ್ಕರ್ ಹಾಡು ಹಾಡಿ ಎಲ್ಲರೂ ಅಳುವಂತೆ ಮಾಡಿದ್ದಾರೆ ಎಂಬ ವಿಡಿಯೋಗಳು ಯೂಟೂಬ್ ನಲ್ಲಿ ಹರಿದಾಡುತ್ತಿವೆ. ಫ್ಯಾಕ್ಟ್‌ಚೆಕ್ : ಸೂರ್ಯಕಾಂತ್ ತಾನು ಸೋನಿ ನಡೆಸುವ ಪ್ರತಿಷ್ಠಿತ ಇಂಡಿಯನ್ ಐಡಲ್ ನಲ್ಲಿ ಹಾಡುತ್ತಿರುವಂತೆ ಹಂಚಿಕೊಂಡಿರುವ ವಿಡಿಯೋ ಎಟಿಟೆಡ್ ಆಗಿದೆ. RK ಸೂಪರ್ ಡ್ಯಾನ್ಸರ್ ಎಂಬ ಯೂಟೂಬ್ ಖಾತೆ ಹೊಂದಿರುವ ಸೂರ್ಯಕಾಂತ್ ಉತ್ತಮ ಡ್ಯಾನ್ಸರ್ ಮತ್ತು ಗಾಯಕರಾಗಿದ್ದಾರೆ. ಅವರು ತಮ್ಮ ಹಾಡುಗಳು ಹೆಚ್ಚು ಜನರಿಗೆ…

Read More

ರಾಹುಲ್‌ ಗಾಂಧಿ ಅರ್ಥವಿಲ್ಲದ ಭಾಷಣ ಮಾಡಿದ್ದಾರೆ ಎಂಬುವುದು ಸುಳ್ಳು..!

ಕಳೆದ ಕೆಲ ದಿನಗಳಿಂದ ರಾಹುಲ್‌ ಗಾಂಧಿಯವರು ಅರ್ಥವಿಲ್ಲ ಭಾಷಣ ಮಾಡುತ್ತಿದ್ದಾರೆ ಮತ್ತು ಅವರ ಮಾತುಗಳು ಯಾರಿಗೂ ಅರ್ಥವಾಗುತ್ತಿಲ್ಲ, ಯಾರಿಗಾದರೂ ಅರ್ಥವಾದರೆ ನಮಗೆ ತಿಳಿಸಿ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ, ಆದರೆ ಇದರ ಹಿಂದಿನ ಸತ್ಯ ಬೇರೆಯದ್ದೇ ಇದೆ. ಹೌದು.. ರಾಹುಲ್‌ ಗಾಂಧಿ  ಮಾತನಾಡಿದ್ದಾರೆ ಎಂಬ ವಿಡಿಯೋದಲ್ಲಿ ಅವರು “ನನ್ನ ತಂದೆ ಕೊಲ್ಲಲ್ಪಟ್ಟರು, ನಾನು ಆ ರೀತಿ ಮಾಡಿಲ್ಲ, ನಾನು ಆಸ್ಪತ್ರೆಯಲ್ಲಿದ್ದೆ, ನನಗೆ ಈ ರೀತಿ ಆಗಿದ್ದರೆ ನಾನು ಸಾಯಿಸುತ್ತಿದ್ದೆ ಎಂದು ಭಾವಿಸಿದ್ದೆ” ; ಎಂಬ…

Read More

ರಾಜಸ್ಥಾನ ಸರ್ಕಾರ ಸಂತ್ರಸ್ತರಿಗೆ ಪರಿಹಾರ ನೀಡುವಾಗ ಧರ್ಮದ ಆಧಾರದಲ್ಲಿ ತಾರತಮ್ಯವೆಸಗಿಲ್ಲ..!

ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲು ಕೆಲ ದಿನಗಳು ಬಾಕಿ ಇವೆ. ಹೀಗಿರುವ ಅಲ್ಲಿನ ಆಡಳಿತ ಪಕ್ಷದ ವಿರುದ್ದ ಈಗ ಹಲವು ರೀತಿಯಾದ ಸುಳ್ಳು ಸುದ್ದಿಯನ್ನ ಹಬ್ಬಲು ಅಲ್ಲಿನ ಕೆಲ ಡಿಜಿಟಲ್‌ ಮಾಧ್ಯಮಗಳು ಪ್ರಾರಂಭ ಮಾಡಿವೆ ಎಂಬ ಆರೋಪ ಕೇಳಿ ಬಂದಿವೆ. ಇದಕ್ಕೆ ಪೂರಕ ಎಂಬಂತೆ ಇದೀಗ ರಾಜಸ್ಥಾನ ಸರ್ಕಾರದ ವಿರುದ್ಧ ದಿನಕ್ಕೆ ಒಂದರಂತೆ, ಒಂದೊಂದೇ ಸುಳ್ಳು ಸುದ್ದಿಗಳು ಹಬ್ಬೋದಕ್ಕೆ ಪ್ರಾರಂಭವಾಗಿವೆ. ಇದರಿಂದ ಅಲ್ಲಿನ ಸರ್ಕಾರ ಇಕ್ಕಟ್ಟಿಗ ಸಿಲುಕಿಕೊಂಡಿದೆ. ಈಗ ಇಂತಹದ್ದೇ ಒಂದು ಸುಳ್ಳು ಸುದ್ದಿ ಅಲ್ಲಿನ ಸರ್ಕಾರವನ್ನ…

Read More

ಬಿಜೆಪಿಗೆ ಮತ ನೀಡಿದ ತಪ್ಪಿಗೆ ಬೆರಳು ಕತ್ತರಿಸಿಕೊಂಡಿದ್ದಾರೆ ಎಂಬುದು ಸುಳ್ಳು

ಬಿಜೆಪಿಗೆ ಮತ ನೀಡಿದ್ದಕ್ಕಾಗಿ ಬೇಸರಗೊಂಡ ವ್ಯಕ್ತಿಯೊಬ್ಬ ತನ್ನ ಬೆರಳು ಕತ್ತರಿಸಿಕೊಂಡಿದ್ದಾನೆ ಎಂಬ ವಿಡಿಯೋ ಒಂದು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಫ್ಯಾಕ್ಟ್‌ಚೆಕ್: ಮಹಾರಾಷ್ಟ್ರದ ಧನಂಜಯ್ ನನವಾರೆ ಎಂಬ ವ್ಯಕ್ತಿಯೊಬ್ಬ ತನ್ನ ಅಣ್ಣ ಮತ್ತು ಅತ್ತಿಗೆ ಆತ್ಮಹತ್ಯೆಯಿಂದ ಸಾವನ್ನಪ್ಪಿಲ್ಲ. ಇದು ಕೊಲೆಯಾಗಿದೆ. ಹಾಗಾಗಿ ನ್ಯಾಯಯುತ ಪೋಲಿಸ್ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಯಾವುದೇ ತನಿಖೆ ನಡೆಸದ ಪೋಲಿಸರ ಮೇಲೆ ಸಿಟ್ಟಿಗೆದ್ದು ತನ್ನ ಬೆರಳು ಕತ್ತರಿಸಿದ್ದಾನೆ ಮತ್ತು ಪ್ರತೀವಾರ ತನ್ನ ದೇಹದ ಅಂಗಾಂಗಳನ್ನು ಕತ್ತರಿಸಿ ಮಹಾರಾಷ್ಟ್ರದ ಮುಖ್ಯಮಂತ್ರಿ…

Read More

ಸಾಲುಮರದ ತಿಮ್ಮಕ್ಕ ಆರೋಗ್ಯವಾಗಿದ್ದಾರೆ, ಸುಳ್ಳು ಸುದ್ದಿ ನಂಬಬೇಡಿ.

ವವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಸಾಲು ಮರದ ತಿಮ್ಮಕ್ಕ ಅವರ ಬಗ್ಗೆ ಕೆಲ ಕಿಡಿಗೇಡಿಗಳು ಸಾಲು ಮರದ ತಿಮ್ಮಕ್ಕ ಇನ್ನಿಲ್ಲ ಎಂದು ಸುಳ್ಳು ಸುದ್ದಿಯನ್ನ ಹರಡುತ್ತಿದ್ದಾರೆ, ಆದರೆ ತಿಮ್ಮಕ್ಕ ಅವರಿಗೆ ಯಾವುದೇ ಸಮಸ್ಯೆ ಆಗಿಲ್ಲ.. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 5ರ ಇಂದು ಬೆಳಿಗ್ಗೆ ಅವರು ಆಸ್ಪತ್ರೆಯಲ್ಲಿ ತಿಂಡಿ ಸೇವಿಸುತ್ತಿರುವ ವಿಡಿಯೋವನ್ನು ಸಾಲು ಮರದ ತಿಮ್ಮಕ್ಕನವರ ದತ್ತು ಪುತ್ರ ಉಮೇಶ್ ವನಸಿರಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲಿ ಅವರು ಚೇತರಿಸಿಕೊಳ್ಳುತ್ತಿರುವುದನ್ನು ನೋಡಬಹುದು….

Read More